srinivaskakkilaya.in - Dr. Bevinje Srinivas Kakkilaya – ಡಾ॥ ಬೇವಿಂಜೆ ಶ್ರೀನಿವಾಸ ಕಕ್ಕಿಲ್ಲಾಯ

Example domain paragraphs

ಸನ್ಮಾನ್ಯ ಡಾ. ಶರಣ್ ಪ್ರಕಾಶ್ ಪಾಟೀಲ್ ಅವರೇ, ಹೊಸ ವೈದ್ಯಕೀಯ ಶಿಕ್ಷಣ ಸಚಿವರಾಗಿ ಅಧಿಕಾರ ವಹಿಸಿಕೊಂಡಿರುವ ತಮ್ಮನ್ನು ಅಭಿನಂದಿಸುತ್ತಾ, ರಾಜ್ಯದಲ್ಲಿ ವೈದ್ಯವೃತ್ತಿ ಹಾಗೂ ವೈದ್ಯಕೀಯ ಶಿಕ್ಷಣಗಳಿಗೆ ಸಂಬಂಧಿಸಿದ ಕೆಲವು ಅತಿ ಮುಖ್ಯ ವಿಷಯಗಳನ್ನು ತಮ್ಮ ಮುಂದಿಡುತ್ತಿದ್ದೇನೆ. 

ಮೊದಲನೆಯದಾಗಿ, ವೈದ್ಯವೃತ್ತಿಯನ್ನು ನಿಯಂತ್ರಿಸುವ ಕರ್ನಾಟಕ ವೈದ್ಯಕೀಯ ಪರಿಷತ್ತಿ(ಕೆಎಂಸಿ) ಗೆ ಉಚ್ಚ ನ್ಯಾಯಾಲಯದ ಆದೇಶದಂತೆ ಚುನಾವಣೆಗಳಾಗಿ ಮೂರೂವರೆ ವರ್ಷಗಳಾದರೂ ಅದರಲ್ಲಿ ಆಯ್ಕೆಯಾದ ಸದಸ್ಯರು ಅಧಿಕಾರ ವಹಿಸಿಕೊಳ್ಳಲು ಇನ್ನೂ ಸಾಧ್ಯವಾಗಿಲ್ಲ, ಆಗಸ್ಟ್ 2011ರಲ್ಲಿ ಆಯ್ಕೆಯಾದವರೇ ಈಗಲೂ ಅದನ್ನು ನಿರ್ವಹಿಸುತ್ತಿದ್ದಾರೆ. ಕೆಎಂಸಿಯಲ್ಲಿ ನ್ಯಾಯಯುತವಾದ ವ್ಯವಸ್ಥೆಯನ್ನು ಸ್ಥಾಪಿಸಲು ಹೊಸ ಸರಕಾರವು ಆದ್ಯತೆ ನೀಡಬೇಕಾಗಿದೆ.

ಕರ್ನಾಟಕ ವೈದ್ಯಕೀಯ ಪರಿಷತ್ತು ವೃತ್ತಿನಿರತ ವೈದ್ಯರಿಂದಾದ ಲೋಪದೋಷಗಳ ಬಗ್ಗೆ, ವೃತ್ತಿಸಂಹಿತೆಯ ಉಲ್ಲಂಘನೆಯ ಬಗ್ಗೆ ಜನರ ಅಹವಾಲುಗಳನ್ನು ಆಲಿಸಿ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕಾದ ಸಾಂವಿಧಾನಿಕ ಸಂಸ್ಥೆಯಾಗಿದೆ. ಅದಕ್ಕೆ ಆಗಸ್ಟ್ 2011ರಲ್ಲಿ ಚುನಾವಣೆಗಳಾದ ಬಳಿಕ ಕೆಎಂಆರ್ ಕಾಯಿದೆಯ ಅನುಸಾರ 5 ವರ್ಷಗಳಲ್ಲಿ ಮತ್ತೆ ಚುನಾವಣೆಗಳು ನಡೆಯಬೇಕಾಗಿತ್ತು. ಆದರೆ ಸಕಾಲಕ್ಕೆ ಚುನಾವಣೆ ನಡೆಸುವ ಸೂಚನೆಗಳಿರದ ಕಾರಣಕ್ಕೆ ನಾವು ಬೆಂಗಳೂರಿನ ಮಾನ್ಯ ಉಚ್ಚ ನ್ಯಾಯಾಲಯದಲ್ಲಿ ರಿಟ್ ಅರ್ಜಿ 48880/2016 ಸಲ್ಲಿಸಿದೆವು. ಡಿಸೆಂಬರ್ 2018ರಲ್ಲಿ ಈ ರಿಟ್ ಅರ್ಜಿಯನ್ನು ಎತ್ತಿ ಹಿಡಿದ ಮಾನ್ಯ ನ್ಯಾಯಾಲಯವು ಎರಡು ತಿಂಗಳಲ್ಲಿ ಚುನಾವಣೆ ನಡೆಸಬೇಕೆಂದು ಆದೇಶ

Links to srinivaskakkilaya.in (1)